Tag: Award

  • ವಿಕಲಚೇತನರ ರಾಷ್ಟ್ರ ಪ್ರಶಸ್ತಿ : ಅರ್ಜಿ ಆಹ್ವಾನ

    ಉಡುಪಿ, ಮೇ 30 : ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿ ಇವರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ ಮತ್ತು ಸಂಸ್ಥೆಗಳಿಂದ ವಿವಿಧ ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿಗಾಗಿ ಆನ್ಲೈನ್ ಮೂಲಕ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ.     

     ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.depwd.gov.in ಮತ್ತು www.award.gov.in ಅಥವಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳ ಅಂತಸ್ತು, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2574810 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  • ಜಾನಪದ ಅಕಾಡೆಮಿಯ 2023-24ರ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿತರಣಾ ಸಮಾರಂಭ; ಎನ್. ಗಣೇಶ್ ಗಂಗೊಳ್ಳಿ ಗೆ ಸನ್ಮಾನ

    ಬೀದರ್: ಕರ್ನಾಟಕ ಜಾನಪದ ಅಕಾಡೆಮಿಯ 2023 ಮತ್ತು 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ, ಪುಸ್ತಕ ಪ್ರದಾನ ಸಮಾರಂಭ ಹಾಗೂ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವು ದಿನಾಂಕ 15-03-2025ರಂದು ಬೀದರ್‌ನ ಪೂಜ್ಯಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಜಾನಪದ ಗಾಯನ ಮತ್ತು ಕಲಾಪ್ರದರ್ಶನಗಳು ಜನಮನ ಸೆಳೆದವು.

    ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಆಯೋಜಿಸಿದ್ದು, ಶ್ರೀ ವಿಜಯಕುಮಾರ್ ಸೋನಾರೆ ಅವರು ಸದಸ್ಯ ಸಂಚಾಲಕತ್ವ ವಹಿಸಿದ್ದರು. 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಕೆಳಗಿನ ಕಲಾವಿದರನ್ನು ಸನ್ಮಾನಿಸಲಾಯಿತು:

    1. ಶ್ರೀಮತಿ ಎಸ್. ಆರ್. ಸರೋಜ – ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ (ಕೊಡಗು ಜಿಲ್ಲೆ)
    2. ಶ್ರೀಮತಿ ಸುನಂದಮ್ಮ – ಕೋಲಾಟ (ಕೋಲಾರ ಜಿಲ್ಲೆ)
    3. ಶ್ರೀ ಮಾರುತಿ ಕೋಳಿ – ಜಾನಪದ ಗಾಯನ (ಬೀದರ್ ಜಿಲ್ಲೆ)
    4. ಶ್ರೀ ಹುರುಗಲವಾಡಿ ರಾಮಯ್ಯ – ಜಾನಪದ ಗಾಯಕರು (ಮಂಡ್ಯ ಜಿಲ್ಲೆ)
    5. ಶ್ರೀ ಎನ್. ಗಣೇಶ್ ಗಂಗೊಳ್ಳಿ – ಜಾನಪದ ಗಾಯಕರು (ಉಡುಪಿ ಜಿಲ್ಲೆ)

    ಈ ಸಮಾರಂಭವು ಕರ್ನಾಟಕದ ಜಾನಪದ ಕಲೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ. ಕಾರ್ಯಕ್ರಮದಲ್ಲಿ ಕಲಾವಿದರಿಂದ ಪ್ರದರ್ಶಿತವಾದ ಜಾನಪದ ಗಾಯನ ಮತ್ತು ಕಲಾಪ್ರದರ್ಶನಗಳು ಜನರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.