Tag: Booker

  • ಕರ್ನಾಟಕದ ಹೆಮ್ಮೆ: ಬಾನು ಮುಷ್ತಾಕ್ ಗೆ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ

    ಬೆಂಗಳೂರು, ಮೇ 21, 2025: ಕರ್ನಾಟಕದ ಸಾಹಿತ್ಯ ಲೋಕ ಇಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಯಿತು. ಕನ್ನಡದ ಪ್ರತಿಭಾನ್ವಿತ ಬರಹಗಾರ್ತಿ ಬಾನು ಮುಷ್ತಾಕ್ ಅವರ ‘ಹೃದಯ ದೀಪ (Heart Lamp)’ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದಿದೆ. ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ ಲೇಖಕಿ ದೀಪಾ ಭಸ್ತಿ ಅವರಿಗೂ ಈ ಸಂದರ್ಭದಲ್ಲಿ ವಿಶೇಷ ಮನ್ನಣೆ ಸಿಗುತ್ತಿದೆ.

    ಕರ್ನಾಟಕದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈ ಸಾಧನೆಯನ್ನು ಕೊಂಡಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿರುವಂತೆ, “ಕರ್ನಾಟಕವು ಉತ್ತಮ ಸಾಹಿತ್ಯದೊಂದಿಗೆ, ಉತ್ಕೃಷ್ಠ ಚಿಂತನೆಗಳ ಮೂಲಕವೂ ಜಗತ್ತನ್ನು ಬೆರಗುಗೊಳಿಸುತ್ತಿದೆ. ಬೂಕರ್ ಪ್ರಶಸ್ತಿ ಪುರಸ್ಕೃತರಾದ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ‘ಹೃದಯ ದೀಪ’ವನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾ ಭಸ್ತಿ ಅವರಿಗೂ ಅಭಿನಂದನೆಗಳು. ಮೌಲ್ಯಯುತ ಬರಹಗಳಿಂದ ಕನ್ನಡ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟ ಬಾನು ಮುಷ್ತಾಕ್ ಅವರ ಸಾಹಿತ್ಯ ಸೇವೆಯು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸುತ್ತೇನೆ.”

    ಈ ಸಾಧನೆಯು ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ತಂದಿದ್ದು, ಗ್ರಾಮೀಣ ಕರ್ನಾಟಕದಿಂದ ಹೊರಹೊಮ್ಮಿದ ಈ ಕೃತಿಯು ಸಾಮಾಜಿಕ ಸಂವೇದನೆಗಳನ್ನು ಗಾಢವಾಗಿ ಚಿತ್ರಿಸುತ್ತದೆ. ಬಾನು ಮುಸ್ತಾಕ್‌ ಮತ್ತು ದೀಪಾ ಭಸ್ತಿ ಅವರ ಈ ಕೊಡುಗೆಯು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.