Tag: Car

  • ಮಂಗಳೂರು: ಸೂರತ್ಕಲ್‌ ಬಳಿ ಚಲಿಸುತ್ತಿದ್ದ ಕಾರಿಗೆ ಬೆಂಕಿ; ಮಹಿಳಾ ಚಾಲಕಿ ಸುರಕ್ಷಿತ

    ಮಂಗಳೂರು, ಮೇ 28, 2025: ಸುರತ್ಕಲ್ ಫ್ಲೈಓವರ್ ಬಳಿ ಚಲಿಸುತ್ತಿದ್ದ ಕಾರೊಂದು ಬುಧವಾರ ಸಂಜೆ ಬೆಂಕಿಗೆ ಆಹುತಿಯಾಗಿದ್ದು, ವಾಹನ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

    ಕಾರನ್ನು ಚಲಾಯಿಸುತ್ತಿದ್ದ ಮಹಿಳಾ ಚಾಲಕಿ ಬೆಂಕಿ ಆರಂಭವಾದಾಗಲೇ ಗಮನಿಸಿ, ಸುರಕ್ಷಿತವಾಗಿ ಹೊರಬಂದಿದ್ದಾರೆ. ಬೆಂಕಿ ಹರಡುವ ಮೊದಲೇ ಆಕೆಯು ವಾಹನದಿಂದ ಇತರ ಸಾಮಾನುಗಳನ್ನು ಹೊರಗೆ ತೆಗೆದುಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

    ಸುರತ್ಕಲ್ ಪೊಲೀಸರಿಂದ ತುರ್ತು ಕರೆ ಬಂದ ನಂತರ, HPCL ಮತ್ತು ರಾಜ್ಯ ಅಗ್ನಿಶಾಮಕ ಇಲಾಖೆಯ ಎರಡೂ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

  • ಬೈಂದೂರು: ಕಾರು ಕಳ್ಳತನ ಪ್ರಕರಣ; ಆರೋಪಿ ಹಾಗೂ ಕಾರು ಪತ್ತೆ

    ಬೈಂದೂರು: ತಾಲೂಕಿನ ಕಿರೀಮಂಜೇಶ್ವರ ಗ್ರಾಮದ ನಾಗುರಿನ ಗೋವಿಂದ ರಾವ್ ರವರ ಜಿ ಏನ್ ಕಾಂಪ್ಲೆಕ್ಸ್ ನ ಹೊರಭಾಗದಲ್ಲಿ ಇರಿಸಿದ್ದ KA 20 MF 3378 ಮಾರುತಿ ಸ್ವಿಫ್ಟ್ ಕಾರು (ಅಂದಾಜು ಮೌಲ್ಯ 8 ಲಕ್ಷ) ದಿನಾಂಕ 01.05.2025 ರಂದು ಬೆಳೆಗಿನ ಜಾವ 4:30 ಗಂಟೆಗೆ ಕಳವಾಗಿದ್ದು. ಈ ಬಗ್ಗೆ ಕಾರು ಮಾಲಕ ಗಣೇಶ್ ಆಚಾರ್ಯ ರವರು ನೀಡಿರುವ ದೂರಿನ ಮೇರೆಗೆ ಬೈಂದುರು ಪೊಲೀಸ್ ಠಾಣೆಯೆಲ್ಲಿ ಅ. ಕ್ರ. 83/2025 ಕಲಂ 303(2) ರಂತೆ ಪ್ರಕರಣ ದಾಖಲಾಗಿರುತ್ತದೆ.

    ಈ ಪ್ರಕರಣದ ಪತ್ತೆಗಾಗಿ ಶ್ರೀ ಹೆಚ್ ಡಿ ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ ಮಾರ್ಗದರ್ಶನದಲ್ಲಿ ಶ್ರೀ ಸಾವೀತ್ರ ತೇಜ ಪೊಲೀಸ್ ವ್ರತ್ತ ನಿರೀಕ್ಷಿಕರು ಬೈಂದೂರು ರವರ ನೇತೃತ್ವ ದಲ್ಲಿ, ಬೈಂದೂರು ಠಾಣೆಯ ಪಿ ಎಸ್ ಐ ರವರಾದ ತಿಮ್ಮೀಶ್ ಬಿ ಏನ್ ಮತ್ತು ನವೀನ ಪಿ ಬೋರಕರ, ಬೈಂದೂರು ಠಾಣೆಯ ಸಿಬ್ಬಂದಿಯವರಾದ ಚಿದಾನಂದ, ಮಾಳಪ್ಪ, ವ್ರತ್ತ ನಿರೀಕ್ಷಿಕರ ಕಚೇರಿಯ ಸಿಬ್ಬಂದಿಯವರಾದ ರವೀಂದ್ರ ವಿಶೇಷ ತಂಡ ರಚಿಸಲಾಯಿತು.

    ವಿಶೇಷ ತಂಡದಲ್ಲಿದ್ದ ಅಧಿಕಾರಿ ಮಟಿಗೂ ಸಿಬ್ಬಂದಿಗಳು ದಿನಾಂಕ 02.05.2025 ರಂದು ಆರೋಪಿ ಪೌಜಾನ್ ಅಹ್ಮದ್ ಸಮೇತ ಕಾರನ್ನು ಪತ್ತೆ ಮಾಡಿ ಕಾರನ್ನು ಸ್ವಧೀನಪಡೆಸಿಕೊಂಡಿದ್ದಾರೆ. ಹಾಗೂ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

    ರಕ್ಷಕ್ ನೆಟ್ವರ್ಕ್ ಅಂಡ್ ಸೆಕ್ಯೂರಿಟಿ ಸೊಲ್ಯೂಷನ್ ಅವರು ಕಾರ್ಯಾಚರಣೆಯಲ್ಲಿ ಸಹಕರಿಸಿರುತ್ತಾರೆ.

    ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಡಾ. ಅರುಣ್ ಕೆ ಐ ಪಿ ಎಸ್. ರವರು ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಶ್ರೀ ಸುಧಾಕರ್ ನಾಯ್ಕ್ ಮತ್ತು ಪರಮೇಶ್ವರ ಹೆಗಡೆ ರವರು ಅಭಿನಂದಿಸಿರುತ್ತಾರೆ.