ಉಡುಪಿ, ಮೇ 22: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 2024-25ನೇ ಸಾಲಿನ “DG & IGP Commendation Disc Award” ಪ್ರಶಂಸನಾ ಪದಕವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಕೆ, ಐಪಿಎಸ್ ರವರು ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಶ್ರೀ ಎಂ.ಎ. ಸಲೀಂ, ಐಪಿಎಸ್ ರವರಿಂದ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಯನ್ನು ಕೊರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ, ಪೊಲೀಸ್ ಸಮುದಾಯದ ಸಮಕ್ಷಮ ಡಾ. ಅರುಣ್ ಕುಮಾರ್ ಅವರ ಅಸಾಧಾರಣ ನಾಯಕತ್ವ ಮತ್ತು ಸೇವೆಗಾಗಿ ನೀಡಲಾಯಿತು.
Tag: Commendation
-
ಉಡುಪಿಯ ಎಸ್‌ಪಿ ಡಾ. ಅರುಣ್ ಕೆ ಸೇರಿದಂತೆ ನಾಲ್ವರು ಡಿಜಿ, ಐಜಿಪಿ ಶ್ಲಾಘನಾ ಪದಕಕ್ಕೆ ಆಯ್ಕೆ
ಉಡುಪಿ, ಮೇ 19: ರಾಜ್ಯದಲ್ಲಿ ಮೊದಲ ಬಾರಿಗೆ 2024-25ನೇ ಸಾಲಿನ ‘ಡಿಜಿ ಮತ್ತು ಐಜಿಪಿ ಶ್ಲಾಘನಾ ಪದಕ’ ಪ್ರದಾನಕ್ಕೆ ಘೋಷಣೆಯಾಗಿದೆ.
ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಸೇರಿದಂತೆ ಜಿಲ್ಲೆಯ ನಾಲ್ವರು ಪೊಲೀಸ್ ಸಿಬ್ಬಂದಿಗಳು ಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಇತರ ಪ್ರಶಸ್ತಿ ವಿಜೇತರು ಮಾಲ್ಪೆ ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಉಪನಿರೀಕ್ಷಕ ವೈಲೆಟ್ ಫೆಮಿನಾ, ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣೆಯ ಮುಖ್ಯ ಕಾನ್‌ಸ್ಟೆಬಲ್ ಗುರುದಾಸ್ ಹಾಗೂ ಉಡುಪಿ ಜಿಲ್ಲಾ ಸಾಯುಧ ಮೀಸಲು ಪಡೆಯ ಸಾಯುಧ ಮೀಸಲು ಮುಖ್ಯ ಕಾನ್‌ಸ್ಟೆಬಲ್ ಸಂತೋಷ್ ಅವರಾಗಿದ್ದಾರೆ.
ಪದಕ ಪ್ರದಾನ ಸಮಾರಂಭವು ಮೇ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.