Tag: dead

  • ಕುಂದಾಪುರ ಬಸ್ ನಿಲ್ದಾಣ: ವ್ಯಕ್ತಿಯೊಬ್ಬರ ಮೃತ್ಯು, ಪ್ರಕರಣ ದಾಖಲು

    ಕುಂದಾಪುರ, ಮೇ 23, 2025: ಕಳೆದ ಮೂರು ವರ್ಷಗಳಿಂದ ಕುಂದಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು, ತಮ್ಮ ಪತ್ನಿಯೊಂದಿಗೆ ಕುಂದಾಪುರದ ಹೊಸ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದರು. ಆದರೆ, ವಿಪರೀತ ಮದ್ಯಸೇವನೆಯಿಂದಾಗಿ ಕಳೆದ ಮೂರು ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ಹೋಗದೇ, ಬಸ್ ನಿಲ್ದಾಣದಲ್ಲಿಯೇ ಮಲಗುತ್ತಿದ್ದರು.

    ದಿನಾಂಕ 22/05/2025ರ ಸಂಜೆ 6:00 ಗಂಟೆಯಿಂದ 23/05/2025ರ ಬೆಳಿಗ್ಗೆ 6:15 ಗಂಟೆಯ ನಡುವೆ, ಈ ವ್ಯಕ್ತಿ ಕುಂದಾಪುರದ ಹೊಸ ಬಸ್ ನಿಲ್ದಾಣದಲ್ಲಿ ಮಲಗಿರುವಾಗ ಅನಾರೋಗ್ಯ ಅಥವಾ ಇನ್ನಿತರ ಕಾರಣದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 28/2025, ಕಲಂ 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.

  • ಮಾಗಡಿ: ವೈಜಿಗುಡ್ಡ ಡ್ಯಾಮ್‌ನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವತಿಯರ ಸಾವು!

    ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ ತಾಲೂತಿನ ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವತಿಯರನ್ನು ಬೆಂಗಳೂರು ಮೂಲದ 18 ವರ್ಷದ ರಾಘವಿ, 20 ವರ್ಷದ ಮಧುಮಿತ ಹಾಗೂ 22 ವರ್ಷದ ರಮ್ಯಾ ಎಂದು ಗುರುತಿಸಲಾಗಿದೆ.

    ಏಳು ಯುವತಿಯರ ತಂಡ ಜಲಾಶಯ ವೀಕ್ಷಣೆಗೆಂದು ತೆರಳಿತ್ತು. ಈ ಪೈಕಿ ಓರ್ವ ಯುವತಿ ನೀರಿಗೆ ಬಿದ್ದಿದ್ದು ಆಕೆಯನ್ನು ರಕ್ಷಿಸಲು ಯುವತಿಯರು ಮುಂದಾಗಿದ್ದಾರೆ. ದುರದೃಷ್ಟವಶಾತ್ ಮೂವರು ಯುವತಿಯರು ನೀರುಪಾಲಾಗಿದ್ದು ನಾಲ್ವರು ಯುವತಿಯರನ್ನು ಯುವಕನೋರ್ವ ರಕ್ಷಿಸಿದ್ದಾನೆ. ಸದ್ಯ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.