Tag: Drunk

  • ಹೊನ್ನಾವರ: ಕುಡಿದು ಬೈಕ್ ವೀಲಿಂಗ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ

    ಹೊನ್ನಾವರ, ಜೂಲೈ 8, 2025: ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕಿ ಮೀನು ಮಾರುಕಟ್ಟೆಯಿಂದ ರೈಲ್ವೆ ಕ್ರಾಸ್‌ವರೆಗಿನ ಹೆದ್ದಾರಿಯಲ್ಲಿ ಕೆಲವರು ಕುಡಿದು ಅಮಲಿನಲ್ಲಿ ಬೈಕ್‌ ವೀಲಿಂಗ್‌ ಮಾಡುತ್ತಾ, ಅತೀ ವೇಗದಲ್ಲಿ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಬಗ್ಗೆ ವಾಟ್ಸ್‌ಆ್ಯಪ್‌ ಮೂಲಕ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸರು ಕಾರ್ಯಪ್ರವೃತ್ತರಾಗಿ, ತಪ್ಪಿತಸ್ಥ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿದ್ದಾರೆ.

    ಕಿಡಿಗೇಡಿಗಳ ವಿರುದ್ಧ ಕರ್ನಾಟಕ ಮೋಟರ್ ವಾಹನ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

  • ಬಂಟ್ವಾಳ: ಮದ್ಯಪಾನ ಮಾಡಿ ಯುವಕರು ಪೆಟ್ರೋಲ್‌ಗೆ ಹಣ ಪಾವತಿಸದೆ ಪರಾರಿ, ಎರಡು ವಾಹನಗಳಿಗೆ ಡಿಕ್ಕಿ

    ಬಂಟ್ವಾಳ, ಮೇ 21: ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರು ಬಿ.ಸಿ. ರೋಡ್‌ನಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ತಮ್ಮ ಆಲ್ಟೋ ಕಾರಿಗೆ ಪೆಟ್ರೋಲ್ ತುಂಬಿಸಿ, ಹಣ ಪಾವತಿಸದೆ ಪರಾರಿಯಾದ ಘಟನೆ ಮಂಗಳವಾರ, ಮೇ 20 ರಂದು ನಡೆದಿದೆ. ಸಲೆತ್ತೂರಿನ ಮೂಲಕ ವೇಗವಾಗಿ ಓಡಿಸಿಕೊಂಡು ಹೋಗುವಾಗ ಪಾಲ್ತಾಜೆಯಲ್ಲಿ ಅವರ ಕಾರು ಆಕ್ಟಿವಾ ಸ್ಕೂಟರ್ ಮತ್ತು ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

    ಕಟ್ಟತ್ತಿಲ ಎಂಬಲ್ಲಿನ ನಿವಾಸಿ ಅಬೂಬಕ್ಕರ್ ಎಂಬಾತ ಆಕ್ಟಿವಾ ಸ್ಕೂಟರ್ ಸವಾರನಾಗಿದ್ದು, ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    112 ತುರ್ತು ಸೇವೆಯ ಪೊಲೀಸ್ ಸಿಬ್ಬಂದಿ ಮತ್ತು ವಿಟ್ಲಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕಾರನ್ನು ಮತ್ತು ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

    ಹಿಂದಿಯಲ್ಲಿ ಮಾತನಾಡಿದ ಈ ಇಬ್ಬರು ಯುವಕರು ರಾಜ್ಯದ ಹೊರಗಿನವರೆಂದು ಶಂಕಿಸಲಾಗಿದೆ.