Tag: Education

  • ಬೆಂಗಳೂರು: LKG ಗೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರವೇಶ ಇಲ್ಲ: ಕರ್ನಾಟಕ ಶಿಕ್ಷಣ ಇಲಾಖೆಯಿಂದ ಆದೇಶ

    ಬೆಂಗಳೂರು, ಮೇ 07, 2025: 2025-26ನೇ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಎಲ್‌ಕೆಜಿ ಪ್ರವೇಶಕ್ಕೆ ಮಕ್ಕಳು ಕನಿಷ್ಠ 4 ವರ್ಷ ಮತ್ತು ಯುಕೆಜಿ ಪ್ರವೇಶಕ್ಕೆ ಕನಿಷ್ಠ 5 ವರ್ಷ ವಯಸ್ಸಾಗಿರಬೇಕೆಂದು ಕಡ್ಡಾಯಗೊಳಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಜಾರಿಗೊಳಿಸಿರುವ ಈ ಆದೇಶವು ಎಲ್ಲ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.

    ಎಲ್‌ಕೆಜಿಗೆ 4 ವರ್ಷ ವಯಸ್ಸಿನ ನಿಯಮವು 2023-24ನೇ ಶೈಕ್ಷಣಿಕ ವರ್ಷದಿಂದ ತಾಂತ್ರಿಕವಾಗಿ ಜಾರಿಯಲ್ಲಿದ್ದರೂ, ಅನೇಕ ಶಾಲೆಗಳು ಈ ನಿಯಮವನ್ನು ಪಾಲಿಸಲು ವಿಫಲವಾಗಿವೆ. ಇದರಿಂದಾಗಿ, 1ನೇ ತರಗತಿಗೆ ಪ್ರವೇಶಕ್ಕೆ ಮಗು ಜೂನ್ 1ರ ವೇಳೆಗೆ 6 ವರ್ಷ ಪೂರೈಸಿರಬೇಕೆಂಬ ನಿಯಮದ ಬಗ್ಗೆ ಗೊಂದಲ ಮತ್ತು ಪೋಷಕರಿಂದ ಒತ್ತಡ ಉಂಟಾಗಿತ್ತು. ಪೋಷಕರ ಒತ್ತಡದಿಂದಾಗಿ 2024-25ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯ ಈ ನಿಯಮವನ್ನು ಸಡಿಲಗೊಳಿಸಲಾಗಿತ್ತು.

    ಆದರೆ, ಕೆಲವು ಪೂರ್ವ-ಪ್ರಾಥಮಿಕ ಶಾಲೆಗಳು ಮತ್ತು ಪೋಷಕರು ಜೂನ್ 1ರ ವೇಳೆಗೆ ನಿಗದಿತ ವಯಸ್ಸನ್ನು ಪೂರೈಸದ ಮಕ್ಕಳನ್ನು ದಾಖಲಿಸುವ ಮೂಲಕ ನಿಯಮವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸರಕಾರಕ್ಕೆ ದೂರುಗಳು ಬಂದಿವೆ. ಭವಿಷ್ಯದಲ್ಲಿ ಈ ನಿಯಮಗಳನ್ನು ದುರ್ಬಲಗೊಳಿಸುವ ಒತ್ತಡ ಮತ್ತು ಗೊಂದಲವನ್ನು ತಪ್ಪಿಸಲು, ಶಾಲಾ ಶಿಕ್ಷಣ ಇಲಾಖೆಯು ವಯಸ್ಸಿನ ಮಾನದಂಡವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದೆ.

    ಹೊಸ ಮಾರ್ಗಸೂಚಿಗಳ ಪ್ರಕಾರ, 2025-26ನೇ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ಅಥವಾ ತತ್ಸಮಾನ ಕೋರ್ಸ್‌ಗೆ ಪ್ರವೇಶಕ್ಕೆ ಮಕ್ಕಳು ಜೂನ್ 1ರ ವೇಳೆಗೆ 4 ವರ್ಷ ಪೂರೈಸಿರಬೇಕು ಮತ್ತು ಯುಕೆಜಿ ಅಥವಾ ತತ್ಸಮಾನ ಕೋರ್ಸ್‌ಗೆ 5 ವರ್ಷ ಪೂರೈಸಿರಬೇಕು. 2026-27ನೇ ಶೈಕ್ಷಣಿಕ ವರ್ಷದಿಂದ, 1ನೇ ತರಗತಿಗೆ ಪ್ರವೇಶಕ್ಕೆ ಮಕ್ಕಳು ಜೂನ್ 1ರ ವೇಳೆಗೆ 6 ವರ್ಷ ಪೂರೈಸಿರಬೇಕು.

    ಈ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವಂತೆ ಇಲಾಖೆಯು ಶಾಲೆಗಳಿಗೆ ಮತ್ತು ಪೋಷಕರಿಗೆ ಮನವಿ ಮಾಡಿದ್ದು, ಸುಗಮ ಜಾರಿಗೆ ಮತ್ತು ಭವಿಷ್ಯದ ತೊಡಕುಗಳನ್ನು ತಪ್ಪಿಸಲು ಸಹಕಾರ ನೀಡುವಂತೆ ಕೋರಿದೆ.

  • ಗಂಗೊಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್‌ ಪಡೆದ ಮನಾಲಿ ಅವರಿಗೆ ಸನ್ಮಾನ

    ಗಂಗೊಳ್ಳಿ: 2024-25ನೇ ಸಾಲಿನಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್‌ ಪಡೆದ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮನಾಲಿ ಅವರನ್ನು ಗಂಗೊಳ್ಳಿಯ ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಪರವಾಗಿ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

    ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ, ಕಾರ್ಯದರ್ಶಿ ಎಚ್. ಗಣೇಶ ಕಾಮತ್, ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಸಂಚಾಲಕ ಎನ್. ಸದಾಶಿವ ನಾಯಕ್, ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಜಿ. ಗೋವಿಂದ್ರಾಯ ಆಚಾರ್ಯ, ಕೆ. ರಾಮನಾಥ ನಾಯಕ್, ಎನ್. ಅಶ್ವಿನ್ ನಾಯಕ್, ಎಂ. ನಾಗೇಂದ್ರ ಪೈ, ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಮುಖೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಸಹಶಿಕ್ಷಕಿ ಸುಜಾತ, ಮಂಜುನಾಥ ಖಾರ್ವಿ, ಮಂಜು ಟೈಲರ್ ಮತ್ತಿತರರು ಉಪಸ್ಥಿತರಿದ್ದರು.

  • ಗಂಗೊಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ 2ನೇ ರ್ಯಾಂಕ್‌ ಪಡೆದ ಸುಶ್ಮಿತಾ ಅವರಿಗೆ ಸನ್ಮಾನ

    ಗಂಗೊಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ 2ನೇ ರ್ಯಾಂಕ್‌ ಪಡೆದ ಗಂಗೊಳ್ಳಿ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್. ಗಾಣಿಗ ಅವರನ್ನು ಅವರ ಮನೆಯಲ್ಲಿ ನಾಯಕವಾಡಿ-ಗುಜ್ಜಾಡಿ ಗಾಣಿಗ ಸಮಾಜ ಬಾಂಧವರ ವತಿಯಿಂದ ಸನ್ಮಾನಿಸಿ ಗೌರವಿಸಿದರು.

    ಗಾಣಿಗ ಸಮಾಜದ ಮುಖಂಡರಾದ ನಾರಾಯಣ ಗಾಣಿಗ ಮೇಲಂಡಿ, ಸೀತಾರಾಮ ಗಾಣಿಗ ಗಂಗೊಳ್ಳಿ, ಪ್ರಮೋದ ಗಾಣಿಗ ಗಂಗೊಳ್ಳಿ, ಗುರುರಾಜ್ ಗಾಣಿಗ ಗುಜ್ಜಾಡಿ, ಸನತ್ ಗಾಣಿಗ, ಸುಮಿತ್ ಗಾಣಿಗ, ನಿತಿನ್ ಗಾಣಿಗ, ಉದಯ ಗಾಣಿಗ ಗಂಗೊಳ್ಳಿ, ಗಂಗಾಧರ ಗಾಣಿಗ ಗಂಗೊಳ್ಳಿ ಮತ್ತು ಗೋವಿಂದ ಗಾಣಿಗ ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.

  • Udupi: Podar International School Organises Spectrum Pulse – An Evening with Podar

    Udupi, May 6, 2025: Podar International School, Udupi, extends its heartfelt gratitude to parents, children, and the entire school community for their enthusiastic participation and unwavering support during Spectrum Pulse – An Evening with Podar. The event, held recently, was a delightful evening filled with engaging games for children and parents, coloring and drawing competitions, and a host of other activities that brought the community together.

    The overwhelming presence and vibrant energy of the attendees made the occasion truly special and unforgettable. The school acknowledges the continued trust placed in them, which fuels their commitment to fostering a joyful and enriching environment for nurturing young minds.

    A special shoutout was given to the dedicated teachers, administrative team, and support staff whose tireless efforts ensured the event’s success. The school also expressed deep appreciation for their respected Principal, Ms. Netra, for her constant guidance and encouragement throughout the planning and execution of the event.

    Podar International School remains dedicated to providing the best educational experience and looks forward to more such community-driven initiatives that strengthen their bond with students, parents, and staff.

  • Green Valley International School Secures 100% Results in ICSC & ISC; Pratik Prabhu Tops with 98.4%, Ranks 8th Nationally

    Shiruru: Green Valley International School has once again proven its academic excellence by achieving a 100% pass result for the academic year 2024-2025, with over 50 students securing distinctions across various subjects.

    Leading the cohort is Pratik Prasad Prabhu, who scored an impressive 98.4%, earning the 8th rank at the national level. Pratik is the son of renowned businessman Prasad Prabhu and Jhanvi Prabhu.

    Out of 92 students appeared, 29 students obtained above 90% marks, 30 students obtained above 80% and 33 students obtained above 70%

    Below are the details of students who secured distinction in their respective fields:

  • Karnataka offers 2 extra chances for SSLC failures to pass; announces dates for exam 2, 3

    Bengaluru, May 3: Primary and Secondary Education Minister Madhu Bangarappa has assured SSLC students who failed or scored low marks in the 2025 exams that they will have two more chances to improve their scores.

    Speaking at a press conference on Friday, May 2, following the declaration of the SSLC 2025 results, the minister stated that students who have not passed will be given another opportunity to clear their exams through SSLC Exam 2 and SSLC Exam 3.

    “The students who have not passed do not need to worry about losing a year. They will get two additional chances to appear for the exams. Until students complete all three exams, or pass, their digital marks card will carry the remark ‘in progress’ instead of ‘fail’,” Madhu Bangarappa explained.

    This year, the SSLC exams were held with strict procedures, and a significant number of students did not pass. Out of 8.96 lakh students, 66.14% were successful. However, for those who failed, the Minister assured that there would be two more attempts available to ensure that no student loses an entire academic year.

    Dates for SSLC Exam 2 & 3:

    • SSLC Exam 2: May 26 to June 2
    • SSLC Exam 3: June 23 to June 30

    The minister also stated that 79,000 students have already registered for the re-examinations and will be given another chance to clear the subjects they failed in.

    This system of three attempts was introduced to support students and allow them to improve their performance. The minister reiterated that the two additional chances would help the students catch up and secure their education without facing the threat of dropping out.

    The announcement has brought relief to the students who didn’t pass and are now looking forward to the upcoming exams.

  • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಪತ್ರಿಕಾ ಪ್ರಕಟಣೆ

    2024 – 25ನೇ (ಈ ವರ್ಷ) ಸಾಲಿನ SSLC ಮತ್ತು 2nd PUC ಯಲ್ಲಿ 90% ಶೇಕಡಕ್ಕಿಂತ ಅಧಿಕ ಅಂಕ ಪಡೆದಿರುವ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 90%ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ತಕ್ಷಣ ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. 

    ನಿಬಂಧನೆಗಳು:

    1. ವಿದ್ಯಾರ್ಥಿಗಳು ಅಲ್ಪಸಂಖ್ಯಾತರಾಗಿರಬೇಕು.
    2. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ 90% ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು.
    3. ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯವರಾಗಿರಬೇಕು.
    4. ವಿದ್ಯಾರ್ಥಿಗಳು ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ: https://forms.gle/6EjXiAUWjmABw7sf8
    5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮೇ 2025

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಝಮೀರ್ ಅಹ್ಮದ್ ರಶಾದಿ (ಸಂಚಾಲಕರು) 9880122968

    _______________💐_______________

    ಮುಷ್ತಾಕ್ ಅಹ್ಮದ್ ಬೆಳ್ವೆ

    ಜಿಲ್ಲಾಧ್ಯಕ್ಷರು 

    ಝಹೀರ್ ನಾಖುದಾ ಗಂಗೊಳ್ಳಿ

    ಪ್ರಧಾನ ಕಾರ್ಯದರ್ಶಿ 

    ನಕ್ವಾ ಯಾಹ್ಯ ಮಲ್ಪೆ

    ಕೋಶಾಧಿಕಾರಿ

  • ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

    ಬೆಂಗಳೂರು, ಮೇ. 01:ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮುಕ್ತಾಯಗೊಂಡು, ಇದೀಗ ಮೌಲ್ಯಮಾಪನ ಕೂಡ ಮುಕ್ತಾಯಗೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲಿದೆ.

    ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಭ್ಯವಾಗಲಿದೆ. https://karresults.nic.in/ ಜಾಲತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ https://kseab.karnataka.gov.in/ ಅಥವಾ https://karresults.nic.in/ ನಲ್ಲಿ ಪ್ರಕಟಿಸಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.

    ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಡೆಸಲಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. 15,881 ಶಾಲೆಗಳ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.

  • ಗಂಗೊಳ್ಳಿ ಸರಸ್ವತಿ ವಿದ್ಯಾಲಯಕ್ಕೆ ಶೇ.90.48 ಫಲಿತಾಂಶ

    ಗಂಗೊಳ್ಳಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿಗೆ ಶೇ.90.48 ಫಲಿತಾಂಶ ದಾಖಲಿಸಿದೆ.

    ಪರೀಕ್ಷೆಗೆ ಹಾಜರಾದ 127 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 27 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ (576), ದಿವ್ಯಾ ಡಿ.ಮೇಸ್ತ (565), ಸೃಷ್ಟಿ (559), ಪ್ರಥಮ್ ಟಿ.ನಾಯಕ್ (553), ಸುಶ್ಮಿತಾ (545), ಶ್ರೀರಕ್ಷಾ ಶೆಣೈ (544), ಮೊತಾಸೀನ್ ಫಾತೀಮಾ (543), ರಕ್ಷಿತಾ (532), ಜೊಲ್ವಿನ್ ಎಲ್.ರೆಬೆಲ್ಲೊ (532), ಫಾತಿಮತ್ ಸಫ್ರೀನ್ (521), ಸ್ವಸ್ತಿಕ್ (520), ಟ್ರೆನಿಟಾ ರೆಬೆಲ್ಲೊ (520), ಗುರುಚರಣ್ ವೈದ್ಯ (520), ಧನುಷ್ ಪಟೇಲ್ (514) ಮತ್ತು ಅಲೈನಾ ಎಂ.ಎಚ್. (513) ಉತ್ತಮ ಸಾಧನೆ ಮಾಡಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ಕ್ಷಮಾ ಆರ್.ಆಚಾರ್ಯ (577), ಜ್ಯೋತಿ ಬೊತೆಲ್ಲೊ (576), ಅಪೇಕ್ಷಾ ಪಿ. (570), ರೋಶಿತ್ ಆರ್.ಚಂದನ್ (562), ಸನ್ನಿಧಿ (561), ಸಂಜನಾ ಖಾರ್ವಿ (558), ಸುನಿಧಿ (554), ಅನ್ವೇಶ್ (546), ಸಹನಾ (543), ಸುಕ್ಷಿತಾ ಎನ್. (539), ಕುಶಿ (538) ಮತ್ತು ಪೂಜಾ ಪೂಜಾರಿ (527) ಉತ್ತಮ ಸಾಧನೆ ಮಾಡಿದ್ದಾರೆ.