Tag: Hiriadka

  • ಹಿರಿಯಡ್ಕ: ರಿಕ್ಷಾ ಚಾಲಕನ ಹತ್ಯೆಗೆ ಯತ್ನ- ಇಬ್ಬರ ಬಂಧನ

    ಹಿರಿಯಡ್ಕ: ಆಟೋ ರಿಕ್ಷಾ ಚಾಲಕನೋರ್ವರಿಗೆ ಕರೆ ಮಾಡಿ ಬಾಡಿಗೆ ಇದೆ ಕರೆಯಿಸಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರುವ ಘಟನೆ ಆತ್ರಾಡಿ ಗ್ಯಾಸ್‌ ಪೆಟ್ರೋಲ್‌ ಬಂಕ್‌ ಬಳಿ ಗುರುವಾರ ರಾತ್ರಿ ನಡೆದಿದೆ.

    ಆಟೋ ರಿಕ್ಷಾ ಚಾಲಕ ಬಡಗಬೆಟ್ಟು ನಿವಾಸಿ ಅಬುಬಕ್ಕರ್‌ (50), ಎನ್ನುವರರಿಗೆ ಅವರ ಪರಿಚಯದ‌ ದಿನೇಶ್ ಎನ್ನುವವರು ಕರೆ ಮಾಡಿ ಮದಗದಿಂದ ಆತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದಾರೆ. ಈ ಹಿನ್ನೆಲೆ ಅಬುಬಕ್ಕರ್‌ ರಿಕ್ಷಾದಲ್ಲಿ ಆತ್ರಾಡಿ ಪೆಟ್ರೋಲ್‌ ಬಂಕ್‌ ಬಳಿ ಮೋಟಾರ್‌ ಸೈಕಲ್‌ ನಲ್ಲಿ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ರಿಕ್ಷಾ ಹಿಂಬಾಲಿಸಿಕೊಂಡು ಬಂದು ಗಾಡಿಯನ್ನು ನಿಲ್ಲಿಸುವಂತೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ.

    ಈ ವೇಳೆ ಅಬುಬಕ್ಕರ್‌ ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದು ಶೇಡಿಗುಡ್ಡೆ ಬಳಿ ರಸ್ತೆಯಲ್ಲಿ ಆಟೋವನ್ನು ನಿಲ್ಲಿಸಿ ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಮೋಟಾರ್‌ ಸೈಕಲ್‌ನಲ್ಲಿದ್ದ ಓರ್ವ ವ್ಯಕ್ತಿ ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್‌ ತಲೆಗೆ ಬೀಸಿದ್ದು, ತಲವಾರಿನ ಹೊಡೆತದಿಂದ ಅಬುಬಕ್ಕರ್‌ ತಪ್ಪಿಸಿಕೊಂಡಿದ್ದಾರೆ.

    ಬೈಕ್‌ನಲ್ಲಿದ್ದ ಇನ್ನೋರ್ವ ವ್ಯಕ್ತಿ ಬಾಟಲಿಯನ್ನು ಕೈಯಲ್ಲಿ ಹಿಡಿದು ಆಟೋ ರಿಕ್ಷಾದ ಮುಂಭಾಗ ಗ್ಲಾಸಿಗೆ ಹೊಡೆದಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದಾರೆಂಬುದನ್ನು ಅರಿತ ಅಬುಬಕ್ಕರ್‌ ಅಲ್ಲೇ ಪಕ್ಕದಲ್ಲಿದ್ದ ಕಂಪೌಡನ್ನು ಜಿಗಿದು ಓಡಿ ಹೋಗಿದ್ದಾರೆ.

    ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲು ಪ್ರಕರಣ ದಾಖಲಾಗಿದ್ದು, ಅಬುಬಕ್ಕರ್‌ ನೀಡಿದ ದೂರಿನ ಅನ್ವಯ ಆರೋಪಿಗಳಾದ ಹಿರಿಯಡ್ಕದ ಬೊಮ್ಮರಬೆಟ್ಟುವಿನ ಸಂದೇಶ್‌(31), ಹಿರಿಯಡ್ಕ ಧರ್ಕಸ್‌ನ ಸುಶಾಂತ್(‌32) ಅವರನ್ನು ಬಂಧಿಸಲಾಗಿದೆ.