Tag: Managuru

  • ಪಾಣೆಮಂಗಳೂರಿನಲ್ಲಿ ಯುವಕನಿಗೆ ಚೂರಿ ಇರಿತ

    ಬಂಟ್ವಾಳ: ನಿನ್ನೆ ಪಾಣೆಮಂಗಳೂರಿನ ಅಕ್ಕರಂಗಡಿಯಲ್ಲಿ ಚಾಕು ಇರಿತ ನಡೆದಿದೆ.

    ಪೈಂಟಿಂಗ್ ವೃತ್ತಿಯಲ್ಲಿದ್ದ ಹಮೀದ್ ಯಾನೆ ಅಮ್ಮಿ ಎಂಬಾತನಿಗೆ ಇರಿತವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ.

    ಶುಕ್ರವಾರ ರಾತ್ರಿ 9ರ ಸುಮಾರಿಗೆ ಬಿ.ಸಿ. ರೋಡ್ ಬಳಿಯ ಹಳೆಯ ಸೇತುವೆ ಬಳಿಯಲ್ಲಿ ಹಮೀದ್ ತನ್ನ ರಿಕ್ಷಾದಲ್ಲಿ ಕುಳಿತುಕೊಂಡಿದ್ದಾಗ ಅಲ್ಲಿಗೆ ಬಂದ ಕಿರಾತಕರು ಆತನ ಕೈಗೆ ಇರಿದಿದ್ದರು. ಮುಖ ಮುಚ್ಚಿಕೊಂಡಿದ್ದ ದಾಳಿಕೋರರ ಗುರುತು ಪತ್ತೆ ಸಾಧ್ಯವಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.