Tag: Safety

  • ಗೋಕರ್ಣ: ರಸ್ತೆ ಸುರಕ್ಷತೆಗಾಗಿ ದನ ಕರುಗಳಿಗೆ ರಿಫ್ಲೆಕ್ಟಿವ್ ಕಾಲರ್ ಅಳವಡಿಕೆ

    ಕಾರವಾರ, ಜೂ.02,2025: ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಧರ ಎಸ್.ಆರ್ ಅವರ ನೇತೃತ್ವದಲ್ಲಿ ವಿನೂತನ ಕಾರ್ಯಕ್ರಮವೊಂದನ್ನು ಜಾರಿಗೆ ತರಲಾಗಿದೆ. ಬೀಡಾಡಿ ದನ-ಕರುಗಳಿಗೆ ರಿಫ್ಲೆಕ್ಟಿವ್ ಕಾಲರ್‌ಗಳನ್ನು ಅಳವಡಿಸುವ ಮೂಲಕ ರಾತ್ರಿಯ ವೇಳೆಯಲ್ಲಿ ವಾಹನ ಚಾಲಕರಿಗೆ ಗೋಚರಿಸುವಂತೆ ಮಾಡಿ, ಸುರಕ್ಷತೆಯನ್ನು ಖಾತ್ರಿಪಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.

    ಈ ಕಾರ್ಯಕ್ರಮವು ರಸ್ತೆಯಲ್ಲಿ ಸಂಚರಿಸುವ ದನ-ಕರುಗಳಿಂದ ಉಂಟಾಗಬಹುದಾದ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ಪ್ರಾಣಿಗಳ ಸುರಕ್ಷತೆಯನ್ನು ಒದಗಿಸಲು ಸಹಾಯಕವಾಗಿದೆ. ಗೋಕರ್ಣ ಪೊಲೀಸ್ ಠಾಣೆಯ ಈ ಪ್ರಯತ್ನವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.