Tag: State

  • Seven year old Bhatkali boy comes under wheel in Dubai, dies

    Dubai: A seven-year-old boy was crushed to death by the wheels of a car when he was crossing the road at Murshid Bazar in Deira Dubai on Saturday.

    The deceased has been identified as Yalah S/o Maulavi Yusha Mohtisham.

    According to sources the boy Yalah was returning back to home on his cycle after attending a class from Irani bazar,
    when this tragic incident took place near Masjid Jamiul Iman.

    It is said that the car first climbed on boy’s leg and when people yelled for caution the car driver got confused and suddenly reversed his car, due to which the wheel of the car climbed on the boy’s head. The boy died on the spot.
     The father of the boy Yusha who was living near the place rushed to the spot, but his son had already taken his last breath.

     It is reported that the boy Yalah was studying in Our Own High School in Dubai in second standard. He was the youngest among the four children of Yusha.

     The body of Yalah has been taken to Raashid Hospital soon after the accident, and was later shifted to Al-Qiyadah. It is beleived that the body will be handed over to the family in the morning after all legal procedures complete.

  • ಶಬರಿಮಲೆ ದೇವಳದಲ್ಲಿ ಕಾಲ್ತುಳಿತ, ನಾಲ್ವರು ಗಂಭೀರ


    ಡುಕ್ಕಿ, ಡಿಸೆಂಬರ್ 25 : ಶಬರಿಮಲೆ ದೇವಸ್ಥಾನದಲ್ಲಿ ಭಾನುವಾರ, ಕ್ರಿಸ್ಮಸ್ ಸಂಜೆ ಕಾಲ್ತುಳಿತ ಸಂಭವಿಸಿದ್ದು, 20 ಜನರು ಗಾಯಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
    ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿರುವ ಮಲಿಕಾಪುರಂ ದೇಗುಲದ ಬಳಿ, ಪ್ರಸಾದ (ಅರವಣ) ತಯಾರಿಸುವ ಘಟಕದ ಬಳಿ ಕಾಲ್ತುಳಿತ ಸಂಭವಿಸಿದೆ. ಗಾಯಗೊಂಡವರನ್ನು ಪಂಪ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾಲ್ತುಳಿತಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯಕ್ಕೆ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
    ಗಾಯಗೊಂಡ ಹೆಚ್ಚಿನವರು ಹೊರರಾಜ್ಯದವರು ಎಂದು ತಿಳಿದುಬಂದಿದೆ.ಕಾಲ್ತುಳಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಪಂಪ ನದಿಯಿಂದ ಮುಖ್ಯ ದೇಗುಲಕ್ಕೆ ಸಾಗುವ ದಾರಿಯಲ್ಲಿ ಭಕ್ತರ ಚಲನವಲನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 2011ರ ಜನವರಿ 15ರಂದು ಇಡುಕ್ಕಿ ಜಿಲ್ಲೆಯ ಪುಲಮೇಡು ಎಂಬಲ್ಲಿ ಜೀಪೊಂದು ಭಕ್ತಾದಿಗಳ ಮೇಲೆ ಉರುಳಿ, ನಂತರ ಸಂಭವಿಸಿದ್ದ ಕಾಲ್ತುಳಿತದಲ್ಲಿ 104 ಜನ ಸತ್ತು 40 ಭಕ್ತರು ಗಾಯಗೊಂಡಿದ್ದರು. ಇವರಲ್ಲಿ 30 ಭಕ್ತರು ಕರ್ನಾಟಕದವರಾಗಿದ್ದರು.
  • ISIS ಸೇರಲು ಹೊರಟಿದ್ದ ಶಂಕಿತ ಉಗ್ರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್, ಬಿಡುಗಡೆ

    Mangaluru: ISIS suspect Munaf Rehman was released after an investigation by the NIA on Sunday here in Mangaluru city.

    The suspect was arrested on suspicious ISIS link on Friday at Mangaluru international airport when he was on his way to abroad via Mangaluru airport. After an investigation by NIA, it has been decide to release the suspect after obtaining a bond from him. The suspect is from Kerala state and is residing in Mangaluru city with his wife. The accused was attracted to ISIS philosophy and was planning to join the terrorist group, the sources said.

    Share to WhatsApp

    Source – Udayavani

  • Bhatkal: 12-year-old boy feared drowned, two others rescued

    Bhatkal, Dec 24: One youngster is feared drowned while two others were rescued at Tengungundi beach here on Saturday December 24.

    Ratan Irappa Naik, Nagendra Tipayya Naik and Puneet Kamlakar Moger, all aged 12, were carried away by the currents when they went to play at the beach after lunch.

    It is learnt that there was a puja programme at Ratan’s house, to which Puneet and Tippayya were also invited. After lunch, the three boys decided to go to the beach.

    All three were pulled away by the strong currents. Luckily, a few fishermen who were on a boat noticed two boys struggling in the water and rushed to their rescue. With the help of the locals, Puneet and Tippayya were brought to safety, while Ratan went missing.

    The boys are students of 8th standard at Tengungundi Government School.

    After initial treatment in Bhatkal Government Hospital, they were shifted to Kundapur.

    Search operation is on for Ratan.

    Ratan is the only son of Irappa Naik.

    A case has been registered in Bhatkal rural police station.


    Share on WhatsApp

  • ಜನವರಿ 3 ರಿಂದ ಬೆಂಗಳೂರು–ಮಂಗಳೂರು ಶಿರಾಡಿ ಘಾಟ್ ಬಂದ್

    ಮಂಗಳೂರು, ಡಿಸೆಂಬರ್, 22 : ಶಿರಾಡಿ ಘಾಟ್ ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುವ ಕಾರಣದಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ಜನವರಿ 3 ರಿಂದ 4 ತಿಂಗಳ ಕಾಲ ವಾಹನ ಸಂಚಾರ ಬಂದ್ ಆಗಲಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟಿಯಲ್ಲಿ 12.5 ಕಿ.ಮೀ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಯುವುದರಿಂದ ವಾಹನ ಸಂಚಾರ ನಿರ್ಬಂಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಬೆಂಗಳೂರು ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ಹೆದ್ದಾರಿ ಪದೇ ಪದೇ ಹಾಳಾಗುತ್ತಿದ್ದು, ಅದನ್ನು ತಡೆಯಲು 26 ಕಿ.ಮೀ ಕಡಿದಾದ ಘಾಟಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದ 13 ಕಿ.ಮೀ ಕಾಂಕ್ರೀಟ್‌ ರಸ್ತೆ ಕಾಮಗಾರಿ 2015ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿದೆ. ಈಗ 90.27 ಕೋಟಿ ರು ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ.

    ಕೆಂಪುಹೊಳೆ ಸೇತುವೆಯಿಂದ ಅಡ್ಡಹೊಳೆ ಸೇತುವೆ ತನಕ (ಕಿ.ಮೀ 250 ರಿಂದ ಕಿ.ಮೀ 263 ತನಕ)12.5 ಕಿ.ಮೀ  ಕಾಂಕ್ರೀಟ್‌ ರಸ್ತೆ ನಿರ್ಮಾಣ ಆಗಲಿದೆ. ಜೂನ್‌ನಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಪುನರಾರಂಭಕ್ಕೆ ಅವಕಾಶ ಮಾಡಿಕೊಡಬೇಕು. ಹೀಗಾಗಿ ಕಾಮಗಾರಿ ಮುಗಿಸಲು ಗುತ್ತಿಗೆ ಪಡೆದಿರುವ ಜಿ.ವಿ.ಆರ್‌. ಇನ್‌ಫ್ರಾ ಪ್ರಾಜೆಕ್ಟ್‌ ಪ್ರೈವೆಟ್ ಲಿಮಿಟೆಡ್‌ ಕಂಪನಿಗೆ 2017 ಏಪ್ರಿಲ್‌ 15 ಕಾಲಮಿತಿ ನೀಡಲಾಗಿದೆ. 73 ಕಿರು ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಂಕ್ರೀಟ್‌ ರಸ್ತೆಗೆ ಅಗತ್ಯವಿರುವ ಜಲ್ಲಿ, ಮರಳು, ಸಿಮೆಂಟ್ ಸೇರಿ ಕಚ್ಚಾ ವಸ್ತುಗಳನ್ನು ಗುತ್ತಿಗೆದಾರರು ಶೇ 60ರಷ್ಟು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಕಾಂಕ್ರೀಟ್‌ ರಸ್ತೆ ನಿರ್ಮಾಣದ ವೇಳೆ 2015ರ ಜನವರಿಯಿಂದ ಆಗಸ್ಟ್‌ ತನಕ ವಾಹನ ಸಂಚಾರ ಬಂದ್ ಮಾಡಲಾಗಿತ್ತು.

     ಪರ್ಯಾಯ ಮಾರ್ಗಗಳು ಇಲ್ಲಿವೆ: ಬೆಂಗಳೂರು – ಹಾಸನ, ಬೇಲೂರು, ಮೂಡಿಗೆರೆ, ಚಾರ್ಮಾಡಿ ಘಾಟಿ, ಬಿ.ಸಿ.ರೋಡ್ ರಸ್ತೆ (366 ಕಿ.ಮೀ)
    ಬೆಂಗಳೂರು – ಹಾಸನ, ಸಕಲೇಶಪುರ, ಹಾನಬಾಳ್‌, ಚಾರ್ಮಾಡಿ ಘಾಟಿ, ಬಿ.ಸಿ.ರೋಡ್ ರಸ್ತೆ (360 ಕಿ.ಮೀ)
    ಬೆಂಗಳೂರು – ಹಾಸನ, ಕೆ.ಆರ್.ನಗರ, ಹುಣಸೂರು, ಮಡಿಕೇರಿ, ಪುತ್ತೂರು, ಬಿ.ಸಿ.ರೋಡ್ ರಸ್ತೆ (375 ಕಿ.ಮೀ)
    ಬೆಂಗಳೂರು – ಮೈಸೂರು, ಮಡಿಕೇರಿ, ಪುತ್ತೂರು, , ಬಿ.ಸಿ.ರೋಡ್ (476)
    ಬೆಂಗಳೂರು – ನೆಲಮಂಗಲ, ಶಿವಮೊಗ್ಗ, ಹೊನ್ನಾವರ, ಮುರುಡೇಶ್ವರ, ಕುಂದಾಪುರ, ಉಡುಪಿ (494 ಕಿ.ಮೀ)
    ಬೆಂಗಳೂರು – ಹಾಸನ, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಕಾರ್ಕಳ, ಉಡುಪಿ (417 ಕಿ.ಮೀ)
    ಬೆಂಗಳೂರು-ಶಿವಮೊಗ್ಗ, ಆಯನೂರು, ಹೊಸನಗರ, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಕುಂದಾಪುರ(457 ಕಿ.ಮೀ)
    ಕಾಮಗಾರಿ ಮುಗಿಯುವವರೆಗೂ ಪ್ರಯಾಣಿಕರು ಈ ಪರ್ಯಾಯ ಮಾರ್ಗಗಳನ್ನ ಬಳಸಿ ಮಂಗಳೂರು ತಲುಪಬಹುದು.

    Share on WhatsApp

    Source – OneIndia

  • ಮಾರ್ಚ್ 30 ರಿಂದ ಏಪ್ರಿಲ್ 12 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ

    ಬೆಂಗಳೂರು, ಡಿಸೆಂಬರ್ 22: 2016-17ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಗುರುವಾರ ಪ್ರಕಟಿಸಿದೆ. ಮಾರ್ಚ್ 30ರಂದು ಪರೀಕ್ಷೆ ಆರಂಭವಾಗಿ ಏಪ್ರಿಲ್ 12ರವರೆಗೆ ನಡೆಯಲಿದೆ. ಪರೀಕ್ಷೆ ವಿಷಯವಾರು ವಿವರ ಹಾಗೂ ದಿನಾಂಕ ಹೀಗಿದೆ.



    ಮಾರ್ಚ್ 30- ಪ್ರಥಮ ಭಾಷೆ
    ಏಪ್ರಿಲ್ 3-ಗಣಿತ
    ಏಪ್ರಿಲ್ 5-ದ್ವಿತೀಯ ಭಾಷೆ
    ಏಪ್ರಿಲ್ 7-ವಿಜ್ಞಾನ
    ಏಪ್ರಿಲ್ 10-ತೃತೀಯ ಭಾಷೆ
    ಏಪ್ರಿಲ್ 12-ಸಮಾಜ ವಿಜ್ಞಾನ

    Share on WhatsApp

    Source : OneIndia

  • Bhatkal: Youth dies after bike skids

    Bhatkal: A 26-Year old youth, Muhammad Suhail Musbah, was reported dead on the spot, when a bike he was riding met with an unintentional skidding, leading to succumb to the injuries. The incident took place on 18th December, Sunday, late night around 12:45 AM on Sagar road near Gulmi cross in Bhatkal.

    The deceased youth has been traced as the resident of KHB colony in Bhatkal.

    According to the sources, it was said that, the incident took place when the deceased Suhail along with his other three friends was out for a party late night. As he was finding himself too late in the night, he decided to turn up for home, in which he drove up his bike in a speed of gale, leading to attempt unfortunate skidding of bike, which turned the situation to claim his life.

    Noticed this by his friends, immediately took his body to his home and rang-up for his brother for immediate attention over the incident. Later he was rushed to Bhatkal govt hospital, where he was finally declared dead.

    In this regard, a case has been registered in Bhatkal police station and further investigations are on.

    Source – Sahil Online

    Share via Whatsapp

  • ದಕ ಕಾಲೇಜು ಕ್ಯಾಂಪಸ್ಸಿನಲ್ಲಿ ಭಯಾನಕ ಮಾದಕ ಜಾಲ!

    ಮಂಗಳೂರು, ಡಿಸೆಂಬರ್ 17 : ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕಾಲೇಜು ಕ್ಯಾಂಪಸ್ ಗಳಲ್ಲಿ ಡ್ರಗ್ಸ್ ಮತ್ತು ವಿಶೇಷವಾಗಿ ಗಾಂಜಾದಂತಹ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು ವ್ಯಾಪಕವಾಗುತ್ತಿದ್ದು, ಕಾಲೇಜುಗಳನ್ನು ಮಾತ್ರವಲ್ಲ ಪೋಷಕರನ್ನೂ ಕಂಗೆಡಿಸಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‍ಐಓ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಿಯೋಗವು ದ.ಕ. ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ರವರಿಗೆ ಶನಿವಾರ ಮನವಿ ಸಲ್ಲಿಸಿತು. ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಜಾಲವು ಕ್ಯಾಂಪಸ್ ನೊಳಗೆ ಕಾಲಿಟ್ಟಿದ್ದು, ವಿದ್ಯಾರ್ಥಿ ಸಮುದಾಯವನ್ನು ತೀವ್ರವಾಗಿ ಬಾಧಿಸಿರುವುದು ಎಸ್‍ಐಓ ಗಮನಿಸಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಕಳೆದ ಎರಡು ವಾರಗಳಿಂದ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿರುವ ಹಲವು ಪ್ರಕರಣಗಳು ಸಾಕ್ಷಿಯಾಗಿವೆ.

    File photo used for representation

    ಕ್ಯಾಂಪಸ್, ಹಾಸ್ಟೆಲ್, ಅತಿಥಿಗೃಹ(ಪಿಜಿ) ಮುಂತಾದ ಕಡೆಗಳಲ್ಲಿ ಪರಿಸ್ಥಿತಿ ಗಂಭೀರಮಟ್ಟಕ್ಕೆ ತಲುಪುತ್ತಿದೆ. ಈ ಕುರಿತು ಶೀಘ್ರವಾಗಿ ಸೂಕ್ತವಾದ ಕ್ರಮ ತೆಗೆದುಕೊಳ್ಳದಿದ್ದರೆ ಜಿಲ್ಲೆಯ ಕ್ಯಾಂಪಸ್‍ಗಳು ಮತ್ತು ವಿದ್ಯಾರ್ಥಿ-ಯುವ ಸಮುದಾಯವು ಸಮಾಜಕ್ಕೆ ಮಾರಕವಾಗುವ ಸ್ಥಿತಿಯನ್ನು ಎದುರಿಸಬೇಕಾದೀತು ಎಂದು ಎಸ್ ಐ ಓ ಮನವಿಯಲ್ಲಿ ಎಚ್ಚರಿಸಿದೆ. ಅಲ್ಲದೆ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಎಸ್‍ಐಓವು 9 ಬೇಡಿಕೆಗಳನ್ನು ಮುಂದಿಡುತ್ತಿದ್ದು, ಈ ಬೇಡಿಕೆಗಳನ್ನು ಪೂರೈಸಬೇಕೆಂದು ಆಗ್ರಹಿಸಿದೆ. ಆ ಬೇಡಿಕೆಗಳು ಇಂತಿವೆ : * ಮಾದಕ ಪದಾರ್ಥಗಳ ಮಾರಾಟ ಜಾಲದ ಮೂಲವನ್ನು ಪತ್ತೆ ಹಚ್ಚಿ ಶೀಘ್ರವೇ ಅದರ ನಿರ್ಮೂಲನೆ ಮಾಡಬೇಕು. * ಮಂಗಳೂರು ನಗರದ ಹೊರವಲಯದಿಂದ ಕ್ಯಾಂಪಸ್‍ಗಳಿಗೆ ಮಾದಕ ಪದಾರ್ಥಗಳನ್ನು ತಲುಪಿಸುವ ಮಧ್ಯವರ್ತಿಗಳ ಜಾಲವನ್ನು ತಡೆಯಬೇಕು ಮತ್ತು ಅವರನ್ನು ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು. * ಕ್ಯಾಂಪಸ್‍ಗಳಲ್ಲಿರುವ Anti Drug Cell ಅನ್ನು ಬಲಪಡಿಸಬೇಕು ಮತ್ತು ಅದರ ಕಾರ್ಯ ಚಟುವಟಿಕೆಯನ್ನು ಫಲಪ್ರದಗೊಳಿಸುವಂತೆ ನಿಗಾ ವಹಿಸಬೇಕು. * ಕೇರಳ ಮಾದರಿ Anti Drug ಪೊಲೀಸ್ ಕಾರ್ಯಾಚರಣೆಯನ್ನು (ವಿದ್ಯಾರ್ಥಿಗಳ ಹೆಸರು ಬಯಲು ಮಾಡದೆ ಕ್ಯಾಂಪಸ್ ಮುಖ್ಯಸ್ಥರು ಮತ್ತು ವಿದ್ಯಾರ್ಥಿಯ ಪೋಷಕರ ಮಧ್ಯಸ್ಥಿಕೆಯಲ್ಲಿ ಅದನ್ನು ಪರಿಹರಿಸಬೇಕು) ನಡೆಸಬೇಕು. * ಮಾದಕ ವ್ಯಸನಿಗಳ ಪುನರ್ವಸತಿಯ ಕುರಿತು ಪೊಲೀಸ್ ಇಲಾಖೆಯು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿಗಾಗಿ ನಿರಂತರ ಶ್ರಮಿಸಬೇಕು. * ಜಿಲ್ಲೆಯಾದ್ಯಂತ ಮಾದಕ ದ್ರವ್ಯದ ದುಷ್ಪರಿಣಾಮ ಮತ್ತು ಈ ಅಪರಾಧದ ಬಗೆಗಿನ ಕಾನೂನು ಜಾಗೃತಿಯನ್ನು ಮೂಡಿಸಬೇಕು. * ನಗರದಲ್ಲಿ ಮತ್ತು ನಗರದ ಹೊರವಲಯದಲ್ಲಿ ಮಾದಕ ವ್ಯಸನದ ಪ್ರಭಾವ ಹೆಚ್ಚಾಗುತ್ತಿದೆಯೋ ಅಲ್ಲಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಮತ್ತು ವಿದ್ಯಾರ್ಥಿ ನಾಯಕರ ಸಭೆಯನ್ನು ಆಯೋಜಿಸಿ ಪರಿಹಾರ ಕಾರ್ಯಗಳ ಕುರಿತು ಚರ್ಚಿಸಬೇಕು. * ಶಾಲಾ ಕಾಲೇಜಿನ 100 ಮೀಟರ್ ಅಂತರದಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಮದ್ಯಪಾನ ಮುಂತಾದವುಗಳ ನಿಷೇಧ ಕಾನೂನು ಇದ್ದರೂ ಹಲವೆಡೆ ಅದರ ಮಾರಾಟ ನಡೆಯುತ್ತಿರುವುದು ಗಮನಿಸಬಹುದಾಗಿದೆ ಇದನ್ನು ಶೀಘ್ರವಾಗಿ ತಡೆಗಟ್ಟವಂತೆ ಮಾಡಬೇಕು. * ಜಿಲ್ಲೆಯಾದ್ಯಂತ ವ್ಯಾಪಕವಾಗುತ್ತಿರುವ ಮಾದಕ ವ್ಯಸನದ ಪ್ರಭಾವದ ಕುರಿತು ಕಾನೂನು ತಜ್ಞರು, ಸಮಾಜ ಸೇವಕರು, ಸಂಶೋಧನಾ ವಿದ್ಯಾಥಿಗಳು ಮತ್ತು ಬುದ್ಧಿ ಜೀವಿಗಳನ್ನೊಳಗೊಂಡ ಒಂದು ತಂಡದಿಂದ ಜಿಲ್ಲೆಯ ಅಧ್ಯಯನ, ಪರಿಸ್ಥಿಯ ಅವಲೋಕನ ಮತ್ತು ಪರಿಹಾರ ಕಾರ್ಯಗಳ ಕುರಿತು ತೀರ್ಮಾನಗಳನ್ನು ಕೈಗೊಳ್ಳಬೇಕು.

    Student Islamic Organization of India has complained to deputy commissioner of Dakshina Kannada district to take strict action against drug peddlers in college campus in Mangaluru and other cities. It has submitted a memorandum demanding action against drug mafia.

    Source – OneIndia

    Share via Whatsapp

  • ದರೋಡೆಯಲ್ಲಿ ಭಾಗಿಯಾಗಿದ್ದ 8 ಪೊಲೀಸರು ಸೇವೆಯಿಂದ ವಜಾ – ಎನ್.ಎಸ್ ಮೆಘರಿಕ್

    ಬೆಂಗಳೂರು: ದರೋಡೆ ಪ್ರಕರಣವೊಂದರಲ್ಲಿ ಶಾಮೀಲಾಗಿದ್ದ ಆರೋಪದಡಿ ಸಬ್ ಇನ್ಸ್ ಪೆಕ್ಟರ್ ಸೇರಿ ಒಟ್ಟು 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಿ ನಗರ ಪೊಲೀಸ್ ಆಯುಕ್ತ. ಎನ್.ಎಸ್ ಮೆಘರಿಕ್ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ನಡೆದಿರುವ ಬ್ಲ್ಯಾಕ್ ಅಂಡ್‌ ವೈಟ್ ದಂಧೆ ಹಾಗೂ ದರೋಡೆ ಪ್ರಕರಣಗಳ ಸಂಬಂಧ ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಿ ಮನೆಗೆ ಕಳುಹಿಸಿಕೊಡಲಾಗಿದೆ.

    ಕಲಾಸಿಪಾಳ್ಯ ಪೊಲೀಸ್‌‌ ಠಾಣೆ ಪಿ.ಎಸ್.ಐ ಮಲ್ಲಿಕಾರ್ಜುನ್, ಪೇದೆಗಳಾದ ಮಂಜುನಾಥ್ ಮಗೊದ್, ಚಂದ್ರಶೇಖರ್‌, ಎಲ್‌‌.ಕೆ.ಗಿರೀಶ್‌‌, ಅನಂತರಾಜು, ಸಿಸಿಬಿ ಪೇದೆ ಶೇಷಾ ಸೇರಿ 7 ಪೊಲೀಸರು ಸೇವೆಯಿಂದ ವಜಾಗೊಂಡ ಪೊಲೀಸರು. ಗಿರಿನಗರ ಪೊಲೀಸ್‌‌‌ ಠಾಣೆ ಪೇದೆಗಳಾದ ಗಿರೀಶ್‌‌, ಮಯೂರ 8 ಲಕ್ಷ ನಗದು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

    ಕಾಮಾಕ್ಷಿಪಾಳ್ಯ ಪೊಲೀಸರು 35 ಲಕ್ಷ ದರೋಡೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಗಿರಿನಗರದ ಇಬ್ಬರು ಪೇದೆಗಳು ಎಂಟು ಲಕ್ಷ ದರೋಡೆ ಕೇಸ್‌‌‌‌ನಲ್ಲಿ ಭಾಗಿಯಾಗಿದ್ದರು. ಇನ್ನು ಸಿಸಿಬಿ ಪೇದೆ ಶೇಷ 22.3 ಲಕ್ಷ ಡಕಾಯತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದರು ಎನ್ನಲಾಗಿದೆ.

    Source – VKnews

    Share via Whatsapp

  • ಉಡುಪಿಯ ಬೀದಿ ನಾಯಿಗಳಿಗೆ ಪ್ರತಿಫಲಕ ಬೆಲ್ಟ್!

    ಉಡುಪಿ, ಡಿಸೆಂಬರ್. 13 : ರಸ್ತೆಯಲ್ಲಿ ಬಿದಿ ನಾಯಿಗಳನ್ನು ಅಪಘಾತದಿಂದ ಕಾಪಾಡುವ ದೃಷ್ಟಿಯಿಂದ ಉಡುಪಿಯ ಸಾಸ್ತಾನ್ ನ ಯುವಕರು ಸೇರಿ ಪ್ರತಿಫಲಕ ಬೆಲ್ಟ್ ಗಳನ್ನೂ ಅಳವಡಿಸುವ ಮೂಲಕ ನಾಯಿಗಳಿಗೆ ರಕ್ಷಣೆ ನೀಡುವಲ್ಲಿ ಮುಂದಾಗಿದ್ದಾರೆ. ನಾಯಿಗಳಿಗೆ ಪ್ರತಿಫಲಕ ಬೆಲ್ಟ್ ಅಳವಡಿಸುವುದರಿಂದ ಬೈಕ್ ಸವಾರರಿಗೂ ರಕ್ಷಣೆ ಮಾಡಿದಂತಾಗಿದೆ.

    ಅದು ಹೇಗೆಂದರೆ, ಕೆಂಪು ಬಣ್ಣದ ಬೆಲ್ಟ್ ನ್ನು ನಾಯಿಗಳ ಕುತ್ತಿಗೆಗೆ ಕಟ್ಟಲಾಗಿದ್ದು, ರಾತ್ರಿ ವೇಳೆ ಆ ಬೆಲ್ಟ್ ಲೈಟ್ ಬೆಳಕಿಗೆ ಹೊಳೆಯುತ್ತದೆ. ಇದರಿಂದ ವಾಹನ ಸವಾರರಿಗೆ ಗೋಚರಿಸಲಿದೆ. ಈ ಬೆಲ್ಟ್ ನಿಂದ ನಾಯಿ ರಕ್ಷಣೆ ಜೊತೆಗೆ ಬೈಕ್ ಸವಾರರನ್ನು ರಕ್ಷಣೆ ಮಾಡಿದಂತಾಗುತ್ತದೆ.

    ಉಡುಪಿಯ ರಾಷ್ಟೀಯ ಹೆದರಿಯಲ್ಲಿ ನಾಯಿಗಳು ಕಾಟ ಹೆಚ್ಚಾಗಿದ್ದು , ಬೈಕ್ ಸವಾರರಿಗೆ ರಾತ್ರಿ ವೇಳೆ ಸಾಕಷ್ಟು ಕಷ್ಟ ಅನುಭಾಹಿಸುವ ಪರಿಸ್ಥಿ ಉಂಟಾಗಿತ್ತು. ಇದನ್ನು ಗಮನಿಸಿದ ಸಾಸ್ತಾನ್ ನ ಯುವಕರು ಬೈಕ್ ಸವಾರರಿಗೆ ಇದರಿಂದ ಕಾಪಾಡುವ ನಿಟ್ಟಿನಲ್ಲಿ ಇಂತ ಒಂದು ಪ್ರಯತ್ನವನ್ನು ಮಾಡಿದ್ದಾರೆ.

    ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ವಿನಯ್ ಚಂದ್ರ ಅವರು, ಚಾಲಕರಿಗೆ ಉಡುಪಿ – ಕುಂದಾಪುರ ಹೆದರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾಯಿಗಳ ಕಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಬಹಿಸಿವೆ, ಇದರಲ್ಲಿ ಬೈಕ್ ಸವಾರರ ಅಪಘಾತ ಸಂಖ್ಯೆ ಜಾಸ್ತಿ . ಈ ನಿಟ್ಟಿನಲ್ಲಿ ಪ್ರತಿಫಲಕ ಬೆಲ್ಟ್ ಗಳನ್ನೂ ನಾಯಿಗಳಿಗೆ ಹಳವಡಿಸುವ ಮೂಲಕ್ಕ ನಾಯಿಗಳಿಗೆ ಹಾಗು ರಸ್ತೆಯಲ್ಲಿ ಪ್ರಯಾಣಿಸುವ ಸವಾರರಿಗೂ ರಕ್ಷಣೆ ಮಾಡಿದಂತಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

    ನಾಯಿಗಳು ಬೈಕ್ ಸವಾರರ ಬೆನ್ನಟ್ಟಿ ಹೋಗುವ ಕರಣ, ಎಷ್ಟೋ ಸವಾರರು ಗಡಿಯಿಂದ ಬಿದ್ದು ಆಸ್ಪತ್ರೆಯಲ್ಲಿ ಧಾಖಲಾದದ್ದು ಇದೆ, ಈ ಕಾರಣದಿಂದ ಸವಾರರನ್ನು ಹಾಗು ನಾಯಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಇಂತ ಒಂದು ಪ್ರಯತ್ನಕ್ಕೆ ಕೈ ಜೈಜೋಡಿಸಿದೆವು ಎನ್ನುತ್ತಾರೆ ವಿನಯ್. ಇನ್ನು ಈ ಪ್ರಯತ್ನ ಯೆಶಸ್ವಿಯಾದಲ್ಲಿ , ಉಡುಪಿಯ ಅನೇಕ ನಾಯಿಗಳ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಈ ಬೆಲ್ಟ್ ಗಳನ್ನೂ ಅಳವಡಿಸಲಾಗುವುದು ಎಂದು ಹೇಳಿದರು.

    Source- One India

    Share via Whatsapp