Tag: Trasi

  • Jackfruit and Fruit Festival Underway in Trasi Today and Tomorrow

    Gangolli, August 9, 2025: The Millennium Church Hall in Trasi is hosting a vibrant Jackfruit and Fruit Festival today (August 9) and tomorrow (August 10), offering a delightful experience for visitors.

    The first-of-its-kind event in Trasi features a variety of jackfruits, including red, saffron, and yellow varieties sourced from Andhra Pradesh, alongside organic mangoes and jackfruit-based products from Karnataka and beyond. Special attractions include jackfruit holige and jackfruit jalebi, which are drawing significant attention from attendees.

    The festival also showcases an array of fruit and flowering plant nurseries, vegetable and flower seeds, and agricultural tools, with over 100 stalls providing diverse options for visitors. The event was inaugurated by local church clergy and is open to the public from morning to evening on both days.

  • ತ್ರಾಸಿ-ಮರವಂತೆ ಬೀಚ್‌ನಲ್ಲಿ ಸುರಕ್ಷತೆ: ಕರಾವಳಿ ಠಾಣೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಚರ್ಚೆ

    ಗಂಗೊಳ್ಳಿ: ತ್ರಾಸಿ-ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಕುರಿತಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆ ಮತ್ತು ಉಡುಪಿ ಜಿಲ್ಲೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತ್ರಾಸಿ-ಮರವಂತೆ ಬೀಚ್‌ನಲ್ಲಿ ಮಂಗಳವಾರ ಚರ್ಚೆ ನಡೆಸಿದರು.

    ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಸಂತ ರಾಮ್ ಆಚಾರ್ ಮಾರ್ಗದರ್ಶನದಲ್ಲಿ ಠಾಣೆಯ ಪಿ‌ಎಸೈ ಮುಕ್ತ ಬಾಯಿ, ಎ‌ಎಸ್ಸೈ ಸಂತೋಷ್ ಕುಂದರ್ ಮತ್ತು ರಾಘವೇಂದ್ರ ದೇವಾಡಿಗ ಅವರು ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಕುರಿತಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ನಿದೀಶ್ ಜೊತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ, ಪ್ರವಾಸಿ ಮಿತ್ರ ಮತ್ತು ಲೈಪ್ ಗಾರ್ಡ್‌ಗಳನ್ನು ನಿಯೋಜಿಸುವ ಕುರಿತು ಚರ್ಚೆ ನಡೆಸಲಾಯಿತು.

  • ಗಂಗೊಳ್ಳಿ: ಮರವಂತೆ ಬೀಚ್‌ ಬಳಿ ಭೀಕರ ಅಪಘಾತ; ಸ್ಕೂಟರ್‌ ಸವಾರ ಸಾವು

    ಗಂಗೊಳ್ಳಿ, ಜುಲೈ 01, 2025: ಪಿಕ್‌ಅಪ್‌ ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮರವಂತೆ ಬಸ್‌ ನಿಲ್ದಾಣದ ಸಮೀಪ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

    ಮರವಂತೆಯ ಬೆಟ್ಟಿನಮನೆ ನಿವಾಸಿ ಲಕ್ಷ್ಮಣ ಪೂಜಾರಿ (45) ಮೃತಪಟ್ಟವರು. ಅವರು ಸ್ಕೂಟರ್‌ನಲ್ಲಿ ತ್ರಾಸಿ ಕಡೆಯಿಂದ ಮರವಂತೆಗೆ ಬಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮರವಂತೆ ಬಸ್‌ ನಿಲ್ದಾಣದ ಸಮೀಪ ಯೂಟರ್ನ್ ತೆಗೆದುಕೊಳ್ಳುತ್ತಿರುವಾಗ ಬೈಂದೂರು ಕಡೆಯಿಂದ ಬರುತ್ತಿದ್ದ ಪಿಕ್‌ಅಪ್‌ ವಾಹನ ಢಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.

    ಘಟನೆಯ ಕುರಿತು ಮಾಹಿತಿ ಪಡೆದ 24×7 ಹೆಲ್ಪ್‌ಲೈನ್ ಆಂಬುಲೆನ್ಸ್ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ ಸಹಕಾರ ನೀಡಿತು. ಗಂಗೊಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ಗಂಗೊಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿಕ್ಕಿ; ವ್ಯಕ್ತಿಗೆ ಗಂಭೀರ ಗಾಯ

    ಗಂಗೊಳ್ಳಿ: ಮರವಂತೆ ಗ್ರಾಮದ ನಿರೋಣಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು (13/05/2025) ಮಧ್ಯಾಹ್ನ 12:00 ಗಂಟೆಗೆ ಘಟನೆಯೊಂದು ನಡೆದಿದೆ. ಪಿರ್ಯಾದಿದಾರರಾದ ಪ್ರವೀಣ್ (36), ಮರವಂತೆ ಗ್ರಾಮ, ಬೈಂದೂರು ಇವರು ಹೆದ್ದಾರಿಯ ಪಕ್ಕದಲ್ಲಿ ನಿಂತಿರುವಾಗ, ಕುಂದಾಪುರ-ಬೈಂದೂರು ಏಕಮುಖ ರಸ್ತೆಯ ಕರASIS ಐಸ್ ಪ್ಲ್ಯಾಂಟ್ ಹತ್ತಿರ GA-07-N-6963 ಕಾರಿನ ಚಾಲಕ ಗೌರೀಶ್ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಪಶ್ಚಿಮ ಬದಿಯಿಂದ ಪೂರ್ವ ಬದಿಯ ಕರಾವಳಿ ಐಸ್ ಪ್ಲ್ಯಾಂಟ್ ಕಡೆಗೆ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಚಿಕ್ಕಪ್ಪ ಕೃಷ್ಣ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.

    ಈ ಘಟನೆಯಿಂದ ಕೃಷ್ಣ ಅವರು ರಸ್ತೆಯ ಡಿವೈಡರ್ ಬಳಿ ಬಿದ್ದು, ಬಲಗಾಲಿಗೆ ತೀವ್ರ ರಕ್ತ ಗಾಯ, ತಲೆಗೆ ಹಾಗೂ ಎದೆಗೆ ಒಳಗಿನ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣ ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

    ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2025ರಡಿ ಕಲಂ 281, 125(A), 125(B) BNS ರಂತೆ ಪ್ರಕರಣ ದಾಖಲಾಗಿದೆ.