Tag: waqf

  • Udupi: Vinay Kumar Sorake Emphasizes Consensus in Waqf Board Chairman Selection

    Udupi, August 23, 2025: Amid ongoing speculation and competition for the Udupi District Waqf Board Chairman position, former minister and senior Congress leader Vinay Kumar Sorake clarified that the selection will prioritize consensus among party leaders. Speaking to the media, Sorake emphasized that the decision will be made after discussions with district Congress MLAs, leaders, and the district in-charge minister, ensuring a suitable candidate is chosen.

    Sorake revealed that he has already consulted with Zameer Ahmed Khan, the state’s Housing, Waqf, and Minority Welfare Minister, on the matter. “We will sit together with Congress MLA candidates and district leaders to finalize the decision,” he said, underscoring the importance of internal harmony. He firmly ruled out any proposals to appoint individuals from outside the Congress party, stating, “There is no discussion about giving the post to anyone else besides Congress members.”

  • ಉಡುಪಿ ಜಿಲ್ಲೆಯಾದ್ಯಂತ “ವಕ್ಫ್ ತಿದ್ದುಪಡಿ ಕಾಯಿದೆ” ವಿರೋಧಿಸಿ ಮಾನವ ಸರಪಳಿ

    ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ವಕ್ಫ್ ತಿದ್ದುಪಡಿ ಕಾಯಿದೆ” ವಿರೋಧಿಸಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ರಾಜ್ಯಾದ್ಯಂತ ಮಾನವ ಸರಪಳಿಗೆ ಕರೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ಜುಮ್ಮಾ ನಮಾಝಿನ ನಂತರ ಮಸೀದಿಯ ಸಮೀಪ ಮುಸ್ಲಿಮರು ಮಾನವ ಸರಪಳಿ ಸಂಘಟಿಸಿದರು.

    ಮಾನವ ಸರಳಪಳಿಯಲ್ಲಿ ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಕರಪತ್ರ ಪ್ರದರ್ಶಿಸಿದರು. ಉಡುಪಿ ಜಿಲ್ಲೆಯಾದ್ಯಂತ ನಡೆದ ಮಾನವ ಸರಪಳಿಯ ಫೋಟೊಗಳು ಇಂತಿವೆ:

  • ಗಂಗೊಳ್ಳಿ: ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಮಾನವ ಸರಪಳಿ

    ಗಂಗೊಳ್ಳಿ, ಜುಲೈ 04, 2025: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ನಿರ್ದೇಶನದಂತೆ, ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಇಂದು ಶುಕ್ರವಾರ, ಜುಲೈ 4, 2025 ರಂದು ಜಾಮಿಯಾ ಮೊಹಲ್ಲಾದ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ಜುಮ್ಮಾ ನಮಾಜಿನ ನಂತರ ಮಧ್ಯಾಹ್ನ 1:45 ರಿಂದ 2:00 ರವರೆಗೆ ನಡೆಯಿತು.

    ಜಮಾತುಲ್ ಮುಸ್ಲಿಮೀನ್ ಜಾಮಿಯಾ ಮಸ್ಜಿದ್ ಗಂಗೊಳ್ಳಿಯ ಸಹಯೋಗದೊಂದಿಗೆ, ಸ್ಥಳೀಯ ಸಮುದಾಯದ ಸದಸ್ಯರು ಒಗ್ಗೂಡಿ, ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ವ್ಯಕ್ತಪಡಿಸಲು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದರು. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲಾಯಿತು.

  • ಉಡುಪಿ: “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಿಕೆ

    ಉಡುಪಿ, ಮೇ 29, 2025: ಕೇಂದ್ರ ಸರ್ಕಾರದ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಮೇ 30, 2025ಕ್ಕೆ ಆಯೋಜಿಸಲಾಗಿದ್ದ “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಬೃಹತ್ ಪ್ರತಿಭಟನಾ ಸಮಾವೇಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಇತ್ತೀಚಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಮಾಯಕನ ಕೊಲೆಯ ಹಿನ್ನೆಲೆಯಲ್ಲಿ ಉಂಟಾದ ಪ್ರತಿಕೂಲ ವಾತಾವರಣದಿಂದಾಗಿ ಈ ನಿರ್ಧಾರವನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಕೈಗೊಂಡಿದೆ.

    ಈ ಸಂದರ್ಭದಲ್ಲಿ, ಸಮಿತಿಯು ಎಲ್ಲ ಸಂಘಟನೆಗಳು, ಮಸೀದಿಗಳು, ಸಂಘ-ಸಂಸ್ಥೆಗಳು ಸಹಕರಿಸಿ ಈ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕೆಂದು ವಿನಂತಿಸಿದೆ. ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಸಮಿತಿ ತಿಳಿಸಿದೆ.

    ಈ ಹಿಂದೆ, ಮೇ 13ರಂದು ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಕಾಶ್ಮೀರದ ಪೆಹಲ್ಗಾಮಿನ ಉಗ್ರವಾದಿ ದಾಳಿಯ ನಂತರ ಭಾರತೀಯ ಸೇನೆಯ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ವರ್ಚಸ್ಸನ್ನು ಕಾಪಾಡಲು ಮುಂದೂಡಲಾಗಿತ್ತು. ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸಲು ಒತ್ತಾಯಿಸಲಾಗಿತ್ತು.

  • ಉಡುಪಿ: “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಪ್ರತಿಭಟನಾ ಸಮಾವೇಶ ಮೇ 30ಕ್ಕೆ!

    ಉಡುಪಿ, ಮೇ 24, 2025: ಕೇಂದ್ರ ಸರ್ಕಾರದ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮೇ 13ರಂದು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಮುಂದೂಡಿತ್ತು. ಈ ಪ್ರತಿಭಟನಾ ಸಮಾವೇಶವು ಈಗ ಮೇ 30, 2025, ಶುಕ್ರವಾರ ಸಂಜೆ 4:00 ಗಂಟೆಗೆ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

    ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸಲಿದ್ದಾರೆ. ಕಾಶ್ಮೀರದ ಪೆಹಲ್ಗಾಮಿನ ಉಗ್ರವಾದಿ ದಾಳಿಯ ನಂತರ ಭಾರತೀಯ ಸೇನೆಯ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ವರ್ಚಸ್ಸನ್ನು ಕಾಪಾಡಲು ಪ್ರತಿಭಟನೆಯನ್ನು ಮುಂದೂಡಲಾಗಿತ್ತು. ಈಗ ಮೇ 30ರಂದು ಈ ಪ್ರತಿಭಟನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.

  • ಆಪರೇಷನ್‌ ಸಿಂಧೂರ್‌ – ರಾಜ್ಯದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

    ಬೆಂಗಳೂರು : ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ನಾಳೆ (ಮೇ 9) ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ತಿಳಿಸಿದ್ದಾರೆ.

    ನಾಳೆ ಶುಕ್ರವಾರ ಮಸೀದಿಗಳಲ್ಲಿ ಮುಸಲ್ಮಾನರೆಲ್ಲರೂ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾರತೀಯ ಸೈನಿಕರಿಗೆ ಕೃತಜ್ಞತೆ, ಧೈರ್ಯ ಹಾಗೂ ಶಕ್ತಿ ತುಂಬಲು ಮಸೀದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

  • ಉಡುಪಿ: “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಪ್ರತಿಭಟನಾ ಸಮಾವೇಶ ಮುಂದೂಡಿಕೆ

    ಉಡುಪಿ: ಕೇಂದ್ರ ಸರ್ಕಾರವು ಜಾರಿಗೊಳಿಸಲು ಯೋಜಿಸಿರುವ ಸಂವಿಧಾನ ವಿರೋಧಿ “ವಕ್ಫ್ ತಿದ್ದುಪಡಿ ಕಾಯ್ದೆ-2025” ವಿರುದ್ಧ ಉಡುಪಿಯ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಮೇ 13ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಮುಂದೂಡಿದೆ ಎಂದು ಮುಸ್ತಾಕ್ ಹೆನ್ನಾಬೈಲ್ ತಿಳಿಸಿದರು.

    ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಾತ್ಯತೀತ ಮನೋಭಾವದ ಸಂವಿಧಾನ ಪ್ರೇಮಿಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು, ಚಿಂತಕರು ಮತ್ತು ಹೋರಾಟಗಾರರು ಒಗ್ಗೂಡಿ, ಹಲವು ಸಿದ್ಧತಾ ಸಭೆಗಳನ್ನು ನಡೆಸಿ, ಪೊಲೀಸ್ ಅನುಮತಿಯೊಂದಿಗೆ ಪ್ರಚಾರ ಕಾರ್ಯ ನಡೆಸಿದ್ದರು. ಜಾತಿ, ಧರ್ಮ, ಲಿಂಗ, ಭಾಷೆಯ ಭೇದವಿಲ್ಲದೆ ಜಿಲ್ಲೆಯಾದ್ಯಂತ ಜನರು ಈ ಕಾಯ್ದೆಯ ವಿರುದ್ಧ ಒಗ್ಗಟ್ಟಿನಿಂದ ಭಾಗವಹಿಸುವ ನಿರೀಕ್ಷೆಯಿತ್ತು. ಪ್ರಚಾರದ ವೇಳೆ ಸಮಾಜದ ಎಲ್ಲ ವರ್ಗದವರಿಂದ ಅಗಾಧ ಬೆಂಬಲ ವ್ಯಕ್ತವಾಗಿತ್ತು,” ಎಂದರು.

    “ಆದರೆ, ಕಾಶ್ಮೀರದ ಪೆಹಲ್ಗಾಮಿನಲ್ಲಿ ನಡೆದ ಉಗ್ರವಾದಿ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರವಾದಿ ನೆಲೆಗಳ ಮೇಲೆ ನಿಖರ ವೈಮಾನಿಕ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ದೇಶದ ಸೇನೆಗೆ ನೈತಿಕ ಬಲವನ್ನು ನೀಡುವ ಜವಾಬ್ದಾರಿ ನಮ್ಮದು. ಆದ್ದರಿಂದ, ದೇಶದ ವರ್ಚಸ್ಸನ್ನು ಕಾಪಾಡುವ ಸದುದ್ದೇಶದಿಂದ ಪ್ರತಿಭಟನೆಯನ್ನು ಮುಂದೂಡಲು ಸಮಿತಿಯು ನಿರ್ಧರಿಸಿದೆ,” ಎಂದು ಅವರು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ನಾಗೇಶ್ ಉದ್ಯಾವರ, ರಫೀಕ್ ಗಂಗೊಳ್ಳಿ, ರಮೇಶ್ ಕಾಂಚನ್, ರಿಯಾಝ್ ಕೋಡಿ, ಇದ್ರಿಸ್ ಹೂಡೆ, ಅಝೀಜ್ ಉದ್ಯಾವರ, ಇಸ್ಮಾಯಿಲ್ ಕಟಪಾಡಿ, ಅಫ್ವಾನ್ ಹೂಡೆ, ಸುಂದರ್ ಮಾಸ್ತರ್ ಮತ್ತಿತರರು ಉಪಸ್ಥಿತರಿದ್ದರು.

  • ಉಡುಪಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೇ 13ರಂದು ಪ್ರತಿಭಟನೆ

    ಉಡುಪಿ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಅಹಿಂದ ಸಂಘಟನೆಗಳ ಸಹಯೋಗದಲ್ಲಿ ಮೇ 8ರಂದು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು “ವಾಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿ ಉಡುಪಿ ಜಿಲ್ಲೆ ಪ್ರಕಟಣೆಯೆಲ್ಲಿ ತಿಳಿಸಿದೆ.

    ಈ ಪ್ರತಿಭಟನೆಯು ಮಂಗಳವಾರ 13ನೇ ಮೇ ಸಂಜೆ 4:00 ಗಂಟೆಗೆ ಉಡುಪಿಯ ಮಿಷನ್ ಕಾಂಪೌಂಡ್ನಲ್ಲಿರುವ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

  • BlackOutAgainstWaqfAmendment ಚಳವಳಿಯ ಯಶಸ್ವಿ ಸಮಾಪ್ತಿ: ಭಾರತದಾದ್ಯಂತ ಒಗ್ಗಟ್ಟಿನ ಪ್ರತಿಭಟನೆ

    ನವದೆಹಲಿ: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB) ಮುನ್ನಡೆಸಿದ #BlackOutAgainstWaqfAmendment ಚಳವಳಿಯು ಏಪ್ರಿಲ್ 30, 2025ರಂದು ಭಾರತದಾದ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಕ್ಫ್ (ತಿದ್ದುಪಡಿ) ಕಾಯಿದೆ, 2025 ವಿರುದ್ಧ ದೇಶಾದ್ಯಂತ ನಡೆದ ಈ ಶಾಂತಿಯುತ ಪ್ರತಿಭಟನೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದು, ರಾತ್ರಿ 9:00 ರಿಂದ 9:15 ರವರೆಗೆ 15 ನಿಮಿಷಗಳ ಕಾಲ ತಮ್ಮ ಮನೆಗಳು, ಕಚೇರಿಗಳು ಮತ್ತು ವಾಣಿಜ್ಯ ಕೇಂದ್ರಗಳ ದೀಪಗಳನ್ನು ಆರಿಸುವ ಮೂಲಕ ಒಗ್ಗಟ್ಟಿನ ಸಂದೇಶವನ್ನು ಸಾರಿದರು.

    ಚಳವಳಿಯ ಉದ್ದೇಶ: AIMPLB ಪ್ರಕಾರ, ವಕ್ಫ್ (ತಿದ್ದುಪಡಿ) ಕಾಯಿದೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ದತ್ತಿ ಆಸ್ತಿಗಳ ಮೇಲಿನ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಹಾಗೂ ಭಾರತೀಯ ಸಂವಿಧಾನದ 14, 15 ಮತ್ತು 29ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಈ ಕಾಯಿದೆಯು ವಕ್ಫ್ ಮಂಡಳಿಗಳಲ್ಲಿ ಗೈರ್-ಮುಸ್ಲಿಮರ ಸೇರ್ಪಡೆ, ಕೇಂದ್ರ ಸರ್ಕಾರದಿಂದ ವಕ್ಫ್ ಆಸ್ತಿಗಳ ದಾಖಲಾತಿ ಮತ್ತು ಲೆಕ್ಕಪರಿಶೋಧನೆಗೆ ಅಧಿಕಾರ ನೀಡುವಂತಹ ಬದಲಾವಣೆಗಳನ್ನು ಒಳಗೊಂಡಿದೆ. ಇದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.

    ಪ್ರತಿಭಟನೆಯ ವ್ಯಾಪ್ತಿ: ದೇಶದ ಪ್ರಮುಖ ನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಚಳವಳಿಯು ವ್ಯಾಪಕ ಬೆಂಬಲ ಪಡೆಯಿತು. AIMPLB ವಕ್ತಾರ ಎಸ್.ಕ್ಯೂ.ಆರ್. ಇಲಿಯಾಸ್ ಅವರು, “ಈ ಶಾಂತಿಯುತ ‘ಬತ್ತೀ ಗುಲ್’ ಕಾರ್ಯಕ್ರಮವು ಕಾಯಿದೆಯ ವಿರುದ್ಧ ದೇಶದ ಜನರ ಒಗ್ಗಟ್ಟಿನ ಧ್ವನಿಯನ್ನು ಪ್ರತಿನಿಧಿಸುತ್ತದೆ. ಇದು ಕೇವಲ ಮುಸ್ಲಿಮರ ಚಳವಳಿಯಲ್ಲ, ಬದಲಿಗೆ ನ್ಯಾಯವನ್ನು ಬಯಸುವ ಎಲ್ಲರ ಒಡನಾಟವಾಗಿದೆ,” ಎಂದು ಹೇಳಿದರು.

    ಪ್ರತಿಭಟನೆಯ ಪರಿಣಾಮ: ಈ ಚಳವಳಿಯು ಸಾಮಾಜಿಕ ಜಾಲತಾಣಗಳಲ್ಲಿ #BlackOutAgainstWaqfAmendment, #BattiGul ಮತ್ತು #SaveWaqfSaveConstitution ಹ್ಯಾಶ್‌ಟ್ಯಾಗ್‌ಗಳೊಂದಿಗೆ ವ್ಯಾಪಕ ಚರ್ಚೆಗೆ ಕಾರಣವಾಯಿತು. ದೇಶಾದ್ಯಂತ ಲಕ್ಷಾಂತರ ಜನರು ಈ ಪ್ರತಿಭಟನೆಯಲ್ಲಿ ಭಾಗಿಯಾದರು ಎಂದು AIMPLB ಅಂದಾಜಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಕಾಯಿದೆಯ ಕೆಲವು ನಿಬಂಧನೆಗಳಿಗೆ ತಡೆಯಾಜ್ಞೆಗಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಮೇ 5, 2025ರವರೆಗೆ ಕಾನೂನಿನ ಕೆಲವು ಭಾಗಗಳ ಜಾರಿಯನ್ನು ಸ್ಥಗಿತಗೊಳಿಸಲಾಗಿದೆ.